Chakravarthi sulibele biography of william



ಚಕ್ರವರ್ತಿ ಸೂಲಿಬೆಲೆ

ಚಕ್ರವರ್ತಿ ಸೂಲಿಬೆಲೆ

Born

ಚಕ್ರವರ್ತಿ ಸೂಲಿಬೆಲೆ


(1980-04-09) ೯ ಏಪ್ರಿಲ್ ೧೯೮೦ (ವಯಸ್ಸು ೪೪)

ಹೊನ್ನಾವರ, ಕರ್ನಾಟಕ, ಭಾರತ

Nationalityಭಾರತೀಯ
Educationಬಿ.ಎಸ್ಸಿ ಗಣಕ ವಿಜ್ಞಾನ
Alma materಅಂಜುಮನ್ ಎಂಜಿನಿಯರಿಂಗ್ ಕಾಲೇಜು, ಭಟ್ಕಳ
Occupationಸಾಮಾಜಿಕ ಕಾರ್ಯಕರ್ತ
Known forಸಾಮಾಜಿಕ ಕಾರ್ಯ

ಚಕ್ರವರ್ತಿ ಸೂಲಿಬೆಲೆ ವಾಗ್ಮಿ, ಚಿಂತಕ, ಅಂಕಣಕಾರ, ಬರಹಹಾರ ಮತ್ತು ಸಾಮಾಜಿಕ ಕಾರ್ಯಕರ್ತ.

ಜೊತೆಗೆ ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕರು.[೧] ಅವರ ಸಾಮಾಜಿಕ ಸೇವೆ ಮತ್ತು ಪರಿಹಾರ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ.[೨] ಇವರ ಮೂಲ ಹೆಸರು 'ಮಿಥುನ್ ಚಕ್ರವರ್ತಿ'.

ಪ್ರಾಥಮಿಕ ಜೀವನ

ಇವರು ೧೯೮೦ರ ಏಪ್ರಿಲ್ ೯ ರಂದು ಉತ್ತರ ಕನ್ನಡ ಜಿಲ್ಲೆಯಹೊನ್ನಾವರದಲ್ಲಿ ಕೊಂಕಣಿ ಮಾತನಾಡುವ ದೈವಜ್ಞ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.

ಇವರ ತಂದೆಯ ಹೆಸರು ದೇವದಾಸ್ ಸುಬ್ರಾಯ ಶೇಟ್. ಇವರು ಸೂಲಿಬೆಲೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಓದಿ ಬೆಳೆದದ್ದು ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಎಂಬ ಗ್ರಾಮದಲ್ಲಿ. ನಂತರ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ವಿಶ್ವವಿದ್ಯಾಲಯ ಪೂರ್ವ ಶಿಕ್ಷಣವನ್ನು ಪಡೆದರು. ಮುಂದೆ ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗಣಕ ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ.

ಸ್ವಾಮಿ ವಿವೇಕಾನಂದರ ಲೇಖನಗಳ ಪ್ರಭಾವಕ್ಕೆ ಒಳಗಾದ ಇವರು ರಾಮಕೃಷ್ಣ ಪರಮಹಂಸರ ಚಿಂತನೆಗಳನ್ನು ಹೊತ್ತೊಯ್ಯುವ ರಾಮಕೃಷ್ಣ ಆಶ್ರಮದ ಸಂಪರ್ಕಕ್ಕೆ ಬಂದರು.

ವೃತ್ತಿ

ಆರಂಭದಲ್ಲಿ ಚಕ್ರವರ್ತಿಯವರು 'ಹೊಸ ಸ್ವಾಂತಂತ್ರ್ಯದ ಬೆಳಕು' ಮುಖ್ಯ ಸಂಪಾದಕರಾಗಿ ಕೆಲಸ ಮಾಡಿದರು. ನಂತರ ಅವರು 'ಗರ್ವ' ಟ್ಯಾಬ್ಲಾಯ್ಡ್‌ ವ್ಯವಸ್ಥಾಪಕ ಸಂಪಾದಕರಾಗಿ ಕೆಲಸ ಮಾಡಿದರು. ಎರಡು ವರ್ಷಗಳಿಗೂ ಹೆಚ್ಚು ಕಾಲ ವಿಜಯ ಕರ್ನಾಟಕದಲ್ಲಿ ಅಂಕಣಕಾರರಾಗಿದ್ದರು.

'ವಿಜಯವಾಣಿ', 'ಹೊಸ ದಿಗಂತ', 'ಸಂಯುಕ್ತ ಕರ್ನಾಟಕ', ಕರ್ಮವೀರ, ವಿವೇಕ ಸಂಪದ ಮತ್ತು ಇತರ ಕೆಲವು ನಿಯತಕಾಲಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದರು. ಇವರು ವಿಜಯವಾಣಿಯಲ್ಲಿ 'ವಿಶ್ವಗುರು' ಎಂಬ ಹೆಸರಿನ ಅಂಕಣಗಳನ್ನು ಬರೆಯುತ್ತಿದ್ದರು.[೩]

ಸಾಮಾಜಿಕ ಕ್ಷೇತ್ರ

  • ವಿದ್ಯಾಭ್ಯಾಸ ಮುಗಿಸಿದ ನಂತರ ಇವರು ರಾಜೀವ್ ದೀಕ್ಷಿತರಆಜಾದಿ ಬಚಾವೋ ಆಂದೋಲನದ ಮೂಲಕ ಸಾಮಾಜಿಕ ಕ್ಷೇತ್ರಕ್ಕೆ ಪ್ರವೇಶಿಸಿದರು.

    ಸ್ವದೇಶಿ ಆಂದೋಲನಕ್ಕೂ ಸೇರ್ಪಡೆಯಾದರು. ಸ್ವದೇಶಿ ವಸ್ತುಗಳನ್ನು ಬಳಸ ಬೇಕೆಂದು ಪ್ರಚಾರ ಹಾಗು ರಾಷ್ಟ್ರೀಯತೆಯ ಪ್ರಚಾರಕ್ಕಾಗಿ ಕರ್ನಾಟಕ ರಾಜ್ಯಾದ್ಯಂತ ಪ್ರವಾಸ ಕೈಗೊಂಡರು.

  • ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಹಭಾಗಿತ್ವವನ್ನು ಹೊಂದಿದ್ದಾರೆ. ಸಾಮಾಜಿಕ ಕಾರ್ಯಕರ್ತರಾಗಿಯೂ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ.
  • ಉಪನ್ಯಾಸಗಳ ಮೂಲಕ ಭಾರತದ ಯುವ ಜನಾಂಗದಲ್ಲಿ ಅಡಗಿರುವ ಸುಪ್ತ ದೇಶ ಭಕ್ತಿಯನ್ನು ಹೊರ ತಂದು ಪ್ರೇರೇಪಿಸುವ ಹಲವಾರು ಕಾರ್ಯ ಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
  • ೨೦೧೯ರ ಸಾರ್ವತ್ರಿಕ ಚುನಾವಣೆಗಳಲ್ಲಿ ಅವರು ಟೀಮ್ ಮೋದಿಯನ್ನು ಸ್ಥಾಪಿಸಿದರು, ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯಾಗಿ ಮರು ಆಯ್ಕೆ ಮಾಡುವ ಉದ್ದೇಶದಿಂದ ಈ ಕಾರ್ಯವನ್ನು ಮಾಡಿದರು.ಇದಕ್ಕಾಗಿ ಅವರು ರಾಜ್ಯದಾದ್ಯಂತ ಎಲ್ಲಾ ೨೮ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದರು.[೪]
  • ಅವರು ಯುವ ಫಾರ್ಮ್ ಅನ್ನು ಸಹ ಪ್ರಾರಂಭಿಸಿದರು.

    (ಸುಭಾಷ್ ಪಾಲೇಕರ್ ಅವರಿಂದ ಶೂನ್ಯ ಬಜೆಟ್ ನ ನೈಸರ್ಗಿಕ ಕೃಷಿ).[೫]

  • ಇವರು ಯುವ ಬಿಗ್ರೇಡನ ಸಂಸ್ಥಾಪಕರಾಗಿದ್ದಾರೆ.

    Anna lisa raya account of william hill

    ಈ ಸಂಸ್ಥೆಯು ರಾಷ್ಟ್ರಕ್ಕೆ ಸೈನಿಕರ ಕೊಡುಗೆ, ದೇಶಭಕ್ತಿ ಕುರಿತು ಯುವಕರಿಗೆ ಶಿಕ್ಷಣ ನೀಡುತ್ತದೆ.[೬]

ಮುದ್ರಣ ಮಾಧ್ಯಮ

  1. ಹೊಸ ಸ್ವಾತಂತ್ರ್ಯದ ಬೆಳಕು ಎಂಬ ಸ್ವದೇಶಿ ಆಂದೋಲನದ ಮುಖ ಪತ್ರಿಕೆಯಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
  2. ಮೇರಾ ಭಾರತ್ ಮಹಾನ್ ಎಂಬ ಕಿರು ಅಂಕಣವನ್ನು ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಪ್ರಾರಂಭಿಸಿದರು.
  3. ವಿಜಯ ಕರ್ನಾಟಕದಲ್ಲಿಯೇ ಹೋಂಗೆ ಕಾಮ್ಯಾಬ್ ಎಂಬ ಅಂಕಣವನ್ನು ಬರೆಯುತ್ತಾ ಬಂದರು.
  4. ಗರ್ವ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿ ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡರು.
  5. ಲೈಫ್ ಸ್ಕ್ಯಾನ್ ಎನ್ನುವ ಸರಣಿ ಅಂಕಣವನ್ನು ಕರ್ಮವೀರ ಪತ್ರಿಕೆಯಲ್ಲಿ ಬರೆದಿದ್ದಾರೆ.

    ಇದಲ್ಲದೆ ಸುಭಾಷ್ ಚಂದ್ರ ಬೋಸ್, ಐನ್‌ಸ್ಟೀನ್ ಹಾಗೂ ಸಚಿನ್ ತಂಡೂಲ್ಕರ್ ಈ ಎಲ್ಲರ ಕುರಿತು ಲೇಖನಗಳನ್ನು ಸೃಷ್ಟಿಸಿದ್ದರು.

  6. ಜಾಗೋ ಭಾರತ್ ಎಂಬ ಸರಣಿ ಅಂಕಣವನ್ನು ವಿಜಯವಾಣಿ ದಿನ ಪತ್ರಿಕೆಯಲ್ಲಿ ಲಿಖಿಸುತ್ತಿದ್ದರು.

ಶ್ರವಣ ಮಾಧ್ಯಮ

ಬೆಂಗಳೂರು ಆಕಾಶವಾಣಿಯ ಜ್ಞಾನವಾಣಿ ವಾಹಿನಿಯಲ್ಲಿ ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯದ ಸರಣಿ ಉಪನ್ಯಾಸ ಮತ್ತು ಇತರ ಉಪನ್ಯಾಸಗಳನ್ನು ನೀಡಿದ್ದಾರೆ.

ಆ ಉಪನ್ಯಾಸದಲ್ಲಿ ಭಾರತಕ್ಕೆ ಸ್ವಾತಂತ್ರ್ಯವು ಗಾಂಧೀಜಿ ನೆಹರೂ, ವಲ್ಲಭಭಾಯಿ ಪಟೇಲ್, ರಾಜಾಜಿ ಮೊದಲಾದ ಲಕ್ಷಾಂತರ ಹೋರಾಟಗಾರರ ಶಾಂತಿಯುತ ಹೋರಾಟದಿಂದ ಬರಲಿಲ್ಲ, ಆದರೆ ಉಗ್ರಗಾಮಿಗಳಾದ ಭಗತ್‍ಸಿಂಗ್, ಅಜಾದ್, ಬರ್ಮಾದ ಮೇಲೆ ಧಾಳಿ ಮಾಡಿ ನಂತರ ವಿಮಾನ ಅಪಘಾತದಲ್ಲಿ ಮಡಿದ ಸುಭಾಷ್‍ಚಂದ್ರಭೋಸ್ ಮೊದಲಾವರಿಂದಲೂ ಬಂದಿತು. ಶಾಂತಿಯುತ ಹೋರಾಟಕ್ಕೆ ಬ್ರಿಟಿಷರು ವಿಶೇಷ ಬೆಲೆಯನ್ನು ಕೊಟ್ಟಿಲ್ಲ ಎಂದು ವಾದ ಮಂಡಿಸಿದ್ದರು.

Anamika periodical jeet biography sample

ಕೃತಿಗಳು

ಸ್ವತಂತ್ರ ಕೃತಿಗಳು

  1. ಮೇರಾ ಭಾರತ್ ಮಹಾನ್
  2. ಪೆಪ್ಸಿ ಕೋಕ್ ಅಂತರಾಳ
  3. ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರ್ಕರ್
  4. ನೆಹರೂ ಪರದೆ ಸರಿಯಿತು
  5. ಸ್ವಾತಂತ್ರ್ಯ ಮಹಾ ಸಂಗ್ರಾಮ ೧೮೫೭- ಒಂದು ವಾಕ್ಚಿತ್ರ
  6. ಭಾರತ ಭಕ್ತ ವಿದ್ಯಾನಂದ
  7. ಸರದಾರ
  8. ಜಾಗೋ ಭಾರತ್ 1 & 2 ಅಂಕಣ ಬರಹ ಸಂಗ್ರಹ
  9. ಗದರ್ ಚಳುವಳಿ (೨೦೧೫)[೭]
  10. ಕಾರ್ಗಿಲ್ ಕದನ ಕಥನ
  11. ವಿಶ್ವ ಗುರು ೧-೨
  12. ಸೂರ್ಯೋದಯ ಕಾಣುತಿದೆ.

ಅನುವಾದಿಸಿದ ಹಾಗು ಸಂಪಾದಿಸಿದ ಕೃತಿಗಳು

  1. ಭಾರತ ಮಾತೆಯ ಕರೆ
  2. ಸ್ವದೇಶಿ ಮತ್ತು ಭಾರತೀಯತೆ
  3. ಗೋ ಚಿಕಿತ್ಸೆ

ಮಾಧ್ಯಮ ಕೆಲಸ

  1. ನಿವೇದನಾ
  2. ತೀರ್ಥಯಾತ್ರೆ
  3. ಸಂಧ್ಯಾರಾಧನೆ
  4. ಹರಟೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
  5. ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ ಎಂಬ ಸರಣಿ ಕಾರ್ಯಕ್ರಮವನ್ನು ರೇಡಿಯೊ ಜ್ಞಾನವಾಣಿಯಲ್ಲಿ ನೀಡಿದ್ದರು.

ಉಲ್ಲೇಖಗಳು